ಸ್ನೇಹಜಾ ಮತ್ತು ಅಲೆಕ್ಸಾಂದ್ರ್

ಬೆಂಗಳೂರು — ೪ ಡಿಸೆಂಬರ್ ೨೦೨೬ · ಪೋರ್ನಿಕ್ — ೨೧ ಡಿಸೆಂಬರ್ ೨೦೨೬


ಸ್ನೇಹಜಾ ಅವರ ಕಡೆ

ಸಾಮಾನ್ಯ ಸ್ನೇಹಿತರು
೩೧
ಅಲೆಕ್ಸಾಂದ್ರ್ಯವರ ಕಡೆ

ನಮ್ಮ ಕಥೆ

ನಮ್ಮ ಕಥೆ ೨೦೨೩ರ ಹೊಸ ವರ್ಷದ ಸಮಯದಲ್ಲಿ ಜರ್ಮನಿಯ ಬೆರ್ಲಿನ್‌ನಲ್ಲಿ ನಡೆದ ಎಸ್ಪೆರಾಂತೊ ಕೂಟದಲ್ಲಿ ಆರಂಭವಾಯಿತು.ಆ ಭೇಟಿಯೇ ನಮ್ಮ ಜೀವನದ ಸುಂದರ ಪಯಣಕ್ಕೆ ನಾಂದಿ ಹಾಡಿತು. ಅಂದಿನಿಂದ ಒಟ್ಟಿಗೆ ಮಾಡಿದ ಪ್ರವಾಸಗಳು ಮತ್ತು ಹೊಸ ಹೊಸ ಅನುಭವಗಳು ನಮ್ಮನ್ನು ಇನ್ನಷ್ಟು ಹತ್ತಿರ ತಂದವು. ೨೦೨೩ರ ಅಕ್ಟೋಬರ್‌ನಲ್ಲಿ, ಬೆಂಗಳೂರಿನಲ್ಲಿ ಮತ್ತೆ ಭೇಟಿಯಾದೆವು. ಸ್ನೇಹಜಾ ಅವರ ಕುಟುಂಬದ ಆತಿಥ್ಯದಲ್ಲಿ ಕಳೆದ ಆ ಎರಡು ಅವಿಸ್ಮರಣೀಯ ವಾರಗಳು ನಮ್ಮ ನಡುವಿನ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿದವು.

೨೦೨೪ರ ಆಗಸ್ಟ್‌ನಲ್ಲಿ, ನಮ್ಮ ಪೋಷಕರೊಂದಿಗೆ ಟಾಂಜಾನಿಯಾಗೆ ಪ್ರಯಾಣ ಮಾಡಿದೆವು. ಅಲ್ಲಿನ ಕ್ಷಣಗಳು ನಮ್ಮ ಜೀವನದ ಮರೆಯಲಾಗದ ನೆನಪುಗಳಾಗಿವೆ. ನಂತರ ೨೦೨೫ರಲ್ಲಿ, ಇಂಡೋನೇಷ್ಯಾಗೆ ತೆರಳಿ ಎಸ್ಪೆರಾಂತೊ ಯುವ ಮಹಾಸಭೆಯಲ್ಲಿ ಭಾಗವಹಿಸಿ, ಬಾಲಿಯ ಸೌಂದರ್ಯವನ್ನು ಅನುಭವಿಸಿದೆವು.

ನಮ್ಮ ಭಾರತೀಯ ವಿವಾಹವನ್ನು ೪ ಡಿಸೆಂಬರ್ ೨೦೨೬ ರಂದು ಬೆಂಗಳೂರಿನಲ್ಲಿ ಹಾಗೂ ಫ್ರೆಂಚ್ ವಿವಾಹ ಸಮಾರಂಭವನ್ನು ೨೧ ಡಿಸೆಂಬರ್ ೨೦೨೬ ರಂದು ಕ್ಲಿಯಾನ್-ಸುರ್-ಮೇರ್ ಪಟ್ಟಣದ ಪುರಸಭೆಯಲ್ಲಿ ಆಚರಿಸಲಿದ್ದೇವೆ.ನಮ್ಮ ಜೀವನದ ಈ ವಿಶೇಷ ಕ್ಷಣವನ್ನು ನಮ್ಮೊಂದಿಗೆ ಆಚರಿಸಲು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇವೆ.

ನಮ್ಮ ಸಂಭ್ರಮಗಳು

ಭಾರತದಲ್ಲಿ ಉತ್ಸವ — ಬೆಂಗಳೂರು

೪ ಡಿಸೆಂಬರ್ ೨೦೨೬

ಸಪ್ತಗಿರಿ ಪ್ಯಾಲೇಸ್

ಕಾರ್ಯಕ್ರಮ :

  • ೩ರಂದು ಸಂಜೆ ೪:೩೦ ಗೆ : ವರಪೂಜೆ
  • ೩ರಂದು ಸಂಜೆ ೭:೩೦ ಗೆ : ಆರತಕ್ಷತೆ
  • ೪ರಂದು ಬೆಳಗ್ಗೆ ೭:೩೦ ಇಂದ : ಧಾರೆ
ನಲ್ಲಿ
೭೩
ದಿನಗಳು
ಗಂಟೆಗಳು
೧೮
ನಿಮಿಷಗಳು
೧೫
ಸೆಕೆಂಡುಗಳು

ಫ್ರಾನ್ಸ್‌ನಲ್ಲಿ ಉತ್ಸವ — ಪೋರ್ನಿಕ್

೨೧ ಡಿಸೆಂಬರ್ ೨೦೨೬

ಕಾರ್ಯಕ್ರಮ :

ನಲ್ಲಿ
೯೦
ದಿನಗಳು
೧೪
ಗಂಟೆಗಳು
೪೪
ನಿಮಿಷಗಳು
೧೫
ಸೆಕೆಂಡುಗಳು

ನಿಮ್ಮ ಹಾಜರಾತಿ ದೃಢಪಡಿಸಿ

೨೦೨೬ ಆಗಸ್ಟ್ ೩೧ರ ಮೊದಲು ನಿಮ್ಮ ಹಾಜರಿಯ ಬಗ್ಗೆ ದಯವಿಟ್ಟು ಖಚಿತಪಡಿಸಿ.

ದಾಖಲಿಸಿದ ಪ್ರತಿಕ್ರಿಯೆಗಳು: ೨೭ (೪೧ ಅತಿಥಿಗಳು)
ಬೆಂಗಳೂರು: ಪ್ರತಿಕ್ರಿಯೆಗಳು (೧೨ ಅತಿಥಿಗಳು) · ಪೋರ್ನಿಕ್: ೨೪ ಪ್ರತಿಕ್ರಿಯೆಗಳು (೩೭ ಅತಿಥಿಗಳು)